ದುರ್ಗಾ ವು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ದ ಒಂದು ರಾಗವಾಗಿದೆ . == ಮೂಲಗಳು == ಈ ರಾಗ ಬಿಲಾವಲ್ಥಾಟ್ ನಿಂದ ಉತ್ಪನ್ನವಾಗಿದೆ. == ತಾಂತ್ರಿಕ ವಿವರಣೆ == ಈ ರಾಗವು ಔಡವ್ -ಔಡವ್ ಸ್ವರೂಪದ್ದಾಗಿದೆ.ಅಂದರೆ ಇದರ ಆರೋಹಣ ಅವರೋಹಣ ಎರಡರಲ್ಲಿಯೂ ೫ ಸ್ವರಗಳು ಮಾತ್ರ ಉಪಯೋಗಿಸಲ್ಪಡುತ್ತವೆ. ಇದರಲ್ಲಿ ಉಪಯೋಗಿಸಲ್ಪಡುವ ಎಲ್ಲಾ ಸ್ವರಗಳು ಶುದ್ಧ ಸ್ವರಗಳಾಗಿವೆ. ಗಾಂಧಾರ ಮತ್ತು ನಿಷಾದ ಇದರಲ್ಲಿ ಉಪಯೋಗಿಸಲ್ಪಡುವುದಿಲ್ಲ . ಇದು ಒಂದು ಪುರ್ವಾಂಗ ಪ್ರಧಾನ ರಾಗವಾಗಿದ. ಥಾಟ್ : ಬಿಲಾವಲ್ ಆರೋಹಣ : ಸ ರಿ ಮ ಪ ಧ ಸ . ಅವರೋಹಣ : ಸ ಧ ಪ ಮ ರಿ ಸ . ಪಕಾದ್ : ರಿ ಮ ಪ ಧ , ಮ ರಿ . ವಾದಿ ಸ್ವರ ಧ ,ಮತ್ತು ಸಂವಾದಿ ರಿ . == ಸಮಯ == ಇದು ರಾತ್ರಿಯ ಎರಡನೇ ಪ್ರಹರದಲ್ಲಿ ಹಾಡಲ್ಪಡುವ ರಾಗವಾಗಿದೆ. == ಉಲ್ಲೇಖಗಳು == ://../sra_raga/sra_raga_that/sra_raga_that_links/.?raga_id=34 2010-09-27 ವೇಬ್ಯಾಕ್ ಮೆಷಿನ್ ನಲ್ಲಿ.